This is the new text page Synopsis of the Works.ಸಮುದಾಯ ಬೆಂಗಳೂರು ಅಭಿನಯಿಸುವ ನಾಟಕ ಸುತ್ತಿಕೊಂಡರೆ ಸರ್ಪ
ರಚನೆ- ಹೆನ್ರಿಕ್ ಇಬ್ಸನ್ - ನಾವರ್ೇಜಿಯನ್ ಮೂಲ- (An Enemy of the People - 1882)
ರೂಪಾಂತರ - ಡಾ|| ಹೆಚ್.ವಿ.ವೇಣುಗೋಪಾಲ್
ಹೆನ್ರಿಕ್ ಇಬ್ಸನ್ : ಒಂದು ಕಾಲದಲ್ಲಿ ಇಡೀ ಯೂರೋಪಿನ ರಂಗಭೂಮಿಯ ಸಾಕ್ಷಿಪ್ರಜ್ಞೆಯಾಗಿದ್ದ ಇಬ್ಸೆನ್ ನಾವರ್ೆ ದೇಶದ ವಾಸ್ತವವಾದಿ ನಾಟಕಕಾರ. ಇವನು ತನ್ನ ತಲೆಮಾರಿನ ಪ್ರಮುಖ ನಾಟಕಕಾರನಾಗಿದ್ದನು. ಮೊದಲು ಇವನು ನಾಟಕ ನಿಮರ್ಾಪಕ, ರಂಗ ವ್ಯವಸ್ಥಾಪಕ ಮುಂತಾಗಿ ರಂಗಭೂಮಿಯ ವಿವಿಧನೆಲೆಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವದೊಂದಿಗೆ ನಾಟಕಕಾರನಾಗಿ ಪ್ರವೇಶಿಸಿದನು. 'ಪ್ರಿಟೆಂಡಸರ್್', 'ಬ್ರಾಂಡ್', 'ಪೀಜರ್ೆಸ್ಟ್', 'ಡಾಲ್ಸ್ ಹೌಸ್', 'ಘೋಸ್ಟ್', 'ಹೆಡ್ಡ ಗಾಬ್ಲರ್', 'ಮಾಸ್ಟರ್ ಬಿಲ್ಡರ್', 'ಎನ್ ಎನಿಮಿ ಆಫé್ ಥೆ ಪೀಪಲ್', 'ವೆನ್ ದಿ ಡೆಡ್ ಅವೇಕನ್' ಮುಂತಾದವುಗಳು ಅವನಿಗೆ ಹೆಸರು ತಂದುಕೊಟ್ಟ ನಾಟಕಗಳು. ಅವನು ಬರೆದ 'ಡಾಲ್ಸ್ ಹೌಸ್' ನಾಟಕ ಪ್ರಯೋಗದ ನಂತರ ಜನತೆ ಅವನ ಕಡೆಗೆ ತಿರುಗಿತು. ಸಹಜ ಸಂಗತಿಗಳ ಮಧ್ಯೆ ಸಹಜ ಜನರನ್ನು ಚಿತ್ರಿಸುವುದು ಅವನ ಶೈಲಿ. ಮೊದಲು ಹೃದಯವನ್ನು ಮುಟ್ಟಿ ನಂತರ ಚಿಂತನೆಗೆ ಅವಕಾಶಮಾಡಿಕೊಡುವುದು ಇಬ್ಸೆನ್ನ ನಾಟಕಗಳು. ಅವನ ಕಾಲದ ಸಾಮಾಜಿಕ ಸಮಸ್ಯೆಗಳೇ ಇಬ್ಸೆನ್ಗೆ ನಾಟಕ ರಚನೆಗೆ ಪ್ರೇರಣೆಗಳು. ಹೆಣ್ಣಿನ ಘನತೆಯನ್ನು ಹೆಚ್ಚಿಸುವ, ಯುವಜನತೆಗೆ ಸ್ವಾತಂತ್ರ್ಯ ನೀಡುವ ದೃಷ್ಟಿಕೋನದಿಂದ ರಚಿಸಿದ ನಾಟಕಗಳು ಸಂಪ್ರದಾಯಸ್ಥರಿಗೆ ಅಪಥ್ಯವಾದವು. ಅವರುಗಳ ನಿರಂತರ ಟೀಕೆ-ಸವಾಲುಗಳ ನಡುವೆಯೇ ಇಬ್ಸೆನ್ ತನ್ನ ನಾಟಕಗಳನ್ನು ರಚಿಸಿದನು.
ಡಾ||ಹೆಚ್.ವಿ.ವೇಣುಗೋಪಾಲ್ : ವೃತ್ತಿಯಲ್ಲಿ ಸಂಂಸ್ಕೃತ ಅಧ್ಯಾಪಕರಾಗಿರುವ ವೇಣುಗೋಪಾಲ್ ಬೆಂಗಳೂರಿನ ರಂಗ ಪರಿಸರದಲ್ಲಿ ಕಳೆದ ಮುವ್ವತ್ತು ವರ್ಷಗಳಿಂದ ಪರಿಚಿತ ಹೆಸರು. ಗೌರೀಬಿದನೂರು ನ್ಯಾಷನಲ್ ಕಾಲೇಜು, ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಪಾಠಮಾಡುತ್ತಾ ವಿದ್ಯಾಥರ್ಿಗಳನ್ನು ರಂಗಭೂಮಿಯಲ್ಲಿ ತೊಡಗಿಸುತ್ತಾ ಕಾಲೇಜು ರಂಗಚಳವಳಿಯೊಂದಿಗೇ ಹವ್ಯಾಸಿ ರಂಗಚಳುವಳಿಯನ್ನು ಬಲಗೊಳಿಸಲು ಶ್ರಮಿಸುತ್ತಿರುವ ಇವರು ಸಮುದಾಯ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. 'ಸುತ್ತಿಕೊಂಡರೆ ಸರ್ಪ', 'ಚಾಕ್ ಸರ್ಕಲ್', 'ಹಳ್ಳಿಯೂರ ಹಮ್ಮೀರ;, ಎಂಬ ನಾಟಕಗಳನ್ನು ರೂಪಾಂತರ ಮಾಡಿರುವರಲ್ಲದೇ 'ಪಕ್ಷಿಲೋಕದಲ್ಲೊಂದು ಪ್ರಸಂಗ', ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ಪಕ್ಷಿಲೋಕದಲ್ಲೊಂದು ಪ್ರಸಂಗ ಎಂಬ ಮಕ್ಕಳ ನಾಟಕವು ರಾಷ್ಟ್ರೀಯ ಮಕ್ಕಳ ನಾಟಕೋತ್ಸವದಲ್ಲಿ ಕಲ್ಕತ್ತಾದಲ್ಲಿ ಪ್ರದಶರ್ಿತವಾಗಿದೆ. ರಂಗ ನಟರು, ನಿದರ್ೇಶಕರಾದ ಇವರು ಕಾಲೇಜಿನ ವಿದ್ಯಾಥರ್ಿಗಳಿಗಾಗಿ 30ಕ್ಕೂ ಕಿರು ನಾಟಕಗಳು, ಬೀದಿನಾಟಕಗಳು, ವಿಜ್ಞಾನ ನಾಟಕಗಳನ್ನು, ಹಾಗು ಮಕ್ಕಳ ನಾಟಕಗಳನ್ನು ನಿದರ್ೇಶಿಸಿದ್ದಾರೆ.
ಪ್ರಮೋದ್ ಶಿಗ್ಗಾಂವ್ : ಪ್ರಮೋದ್ ನೀನಾಸಂ ಪದವೀಧರರು. ಕಳೆದ ಹತ್ತು ವರ್ಷಗಳಿಗೂ ಮೇಲ್ಪಟ್ಟು ಕಾಲದಿಂದ ಕನರ್ಾಟಕದ ಉದ್ದಗಲದಲ್ಲಿ ಮೂವತ್ತಕ್ಕೂ ಹೆಚ್ಚು ನಾಟಕಗಳನ್ನು ನಿದರ್ೆಶಿಸಿ, ಹವ್ಯಾಸಿ ನಾಟಕಗಳ ಯಶಸ್ವೀ ನಿದರ್ೆಶಕರೆನಿಸಿಕೊಂಡವರು. ಉತ್ತಮ ವಸ್ತ್ರ ವಿನ್ಯಾಸಕಾರರಾಗಿ, ನಟರಾಗಿ, ರಂಗಭೂಮಿ ಮಾತ್ರವಲ್ಲದೇ ಸಿನೇಮಾ ಹಾಗು ದೂರದರ್ಶನ ಮಾಧ್ಯಮಗಳಲ್ಲೂ ಯಶಸ್ವಿಯಾಗಿದ್ದಾರೆ. ಹವ್ಯಾಸಿ ರಂಗಭೂಮಿ ಹಾಗು ಕಾಲೇಜು ರಂಗಭೂಮಿಯಲ್ಲಿ ಎಲ್ಲ ಕಾಲಗಳಲ್ಲಿಯೂ ನೆನಪಿಡಬೇಕಾದ ಅತ್ಯುತ್ತಮ ನಾಟಕಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಕನ್ಯಾಬಲಿ, ದಂಗೆಯ ಮುಂಚಿನ ದಿನಗಳು, ಮದರ್ ಕರೇಜ್, ಪಂಪ ಭಾರತ, ಚಿರಸ್ಮರಣೆ, ತ್ರೀ ಪೆನ್ನಿ ಅಪೇರ, ಚಂದ್ರಹಾಸ, ಘಾಶೀರಾಂ ಕೊತ್ವಾಲ್, ಕಳವು, ನಂಗ್ಯಾಕೋ ಡೌಟು, ದಿಶಾಂತರ ಮುಂತಾದವುಗಳು ಅವರ ಯಶಸ್ವೀ ನಾಟಕಗಳು. ಈ ಬಾರಿ ಸಮುದಾಯಕ್ಕಾಗಿ ಸುತ್ತಿಕೊಂಡರೆ ಸರ್ಪ ನಾಟಕವನ್ನು ನಿದರ್ೆಶಿಸಿದ್ದಾರೆ.
ಸುತ್ತಿಕೊಂಡರೆ ಸರ್ಪ : ಪುರಸಭೆಯ ಮುಖ್ಯ ವೈದ್ಯಾಧಿಕಾರಿಯಾಗಿ ಡಾಕ್ಟರ್ ಸಿದ್ಧಾಂತ್ ಜಾಗೀದರ್ಾರ್ ಊರಿನ ಹಿತಕ್ಕಾಗಿ ರಚಿಸಿಕೊಟ್ಟ ನೀರುಸರಬರಾಜಿನ ವ್ಯವಸ್ಥೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ದೋಷಪೂರಿತ ಕಾರ್ಯನಿರ್ವಹಣೆಯಿಂದಾಗಿ ತ್ಯಾಜ್ಯ ನೀರಿನೊಡನೆ ಬೆರೆತು ಆ ನೀರನ್ನು ಕುಡಿಯುವ ಜನಗಳ ಆರೋಗ್ಯವನ್ನು ಕೆಡಿಸುತ್ತಿವೆ. ಈ ಸಂಗತಿಯನ್ನು ಕರಾರುವಾಕ್ಕಾದ ಸಂಶೋಧನೆಯಿಂದ ವಸ್ತುನಿಷ್ಠ ವರದಿ ಸಿದ್ಧಪಡಿಸಿ ಡಾಕ್ಟರ್ ಸಿದ್ಧಾಂತ್ ಜಾಗೀದರ್ಾರ್ ಪುರಸಭೆಗೆ ಮಂಡಿಸುತ್ತಾನೆ ಅದು ಅವನ ಅಣ್ಣ, ಪುರಸಭೆಯ ಮೇಯರ್ ಆದ ಪ್ರೊ.ಪ್ರತಾಪ್ ಜಾಗೀದರ್ಾರ್ನನ್ನು ಕೆರಳಿಸುತ್ತದೆ. ಈ ವರದಿ ಒಪ್ಪಿಕೊಂಡರೆ ತನ್ನ ರಾಜಕೀಯ ಜೀವನಕ್ಕೆ ಕುಂದುಂಟಾಗುತ್ತದೆ ಎಂದು ತಿಳಿದ ಅವನು ಸಿದ್ಧಾಂತ್ನೊಡನೆ ನೇರವಾಗಿ ಜಗಳಕ್ಕಿಳಿಯುತ್ತಾನೆ. ವೈಯಕ್ತಿಕ ಜಗಳ ಊರಿನ ಜಗಳವಾಗಿ ಬೆಳೆದು ಸಿದ್ಧಾಂತ್ನನ್ನು ಊರಿಗೆ ಊರೇ 'ಜನಗಳ ಶತ್ರು' ಎಂದು ಘೋಷಿಸುವಂತೆ ಪ್ರಭಾವ ಬೀರುತ್ತಾನೆ. ಊರಿನ ಹಿತ ಕಾಪಾಡಲು ಉದ್ಯುಕ್ತನಾದವನನ್ನು ಊರಿನ ಶತ್ರುವಾಗಿಸಿ ಮೆರೆಯುವ ರಾಜಕೀಯ ತಿರುವುಗಳು ಇಂದಿಗೂ ಪ್ರಸ್ತುತವಾಗಿವೆ.